¡Sorpréndeme!

ನನ್ಮಗಂದ್, ಹುಚ್ಚ ವೆಂಕಟ್ ಮುಂದಿನ ಪ್ರಧಾನಿಯಂತೆ | Oneindia Kannada

2018-01-12 987 Dailymotion

I will be Prime Minister of India. I will enter politics with the new party in the upcoming elections, said Kannada film artist Huccha Venkat here in Mangaluru on January 11th.

ಉಸಿರು ಬಿಗಿ ಹಿಡಿದು ಈ ಸುದ್ದಿ ಓದಿಕೊಳ್ಳಿ. ಏಕೆಂದರೆ ಚಿತ್ರ ನಟ ಹುಚ್ಚ ವೆಂಕಟ್ ತಮ್ಮ ಗುರಿಯನ್ನು ಬಹಿರಂಗ ಮಾಡಿದ್ದಾರೆ. "ನಾನೇ ರಾಜಕೀಯ ಪಕ್ಷವೊಂದನ್ನು ಆರಂಭಿಸುತ್ತೇನೆ. ಈ ದೇಶದ ಪ್ರಧಾನ ಮಂತ್ರಿ ಆಗ್ತೀನಿ" ಎಂದು ಹೇಳಿದ್ದಾರೆ ವೆಂಕಟ್. ಇಲ್ಲಿ ತಮ್ಮ ಹೊಸ ಚಿತ್ರ ಡಿಕ್ಟೇಟರ್ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ರಾಜಕೀಯಕ್ಕೆ ಪ್ರವೇಶ ಕೊಡಬೇಕೆಂದು ಆಸೆ ಇದೆ. ಆದರೆ ತಂದೆಯವರು ಈ ಬಗ್ಗೆ ಒಪ್ಪಿಗೆ ನೀಡಿಲ್ಲ ಎಂದು ಅವರು ಹೆಳಿದರು.ಈ ಹಿನ್ನೆಲೆಯಲ್ಲಿ 5 ವರ್ಷಗಳ ಬಳಿಕ ತಂದೆಯನ್ನು ಒಪ್ಪಿಸಿ, ರಾಜಕೀಯ ಪ್ರವೇಶ ಮಾಡಲಿದ್ದೇನೆ. ನನಗೆ 60 ವರ್ಷ ಆಗುವ ವೇಳೆಗೆ ಪ್ರಧಾನಿ ಆಗಿಯೇ ಆಗುತ್ತೇನೆ ಎಂದು ಹುಚ್ಚ ವೆಂಕಟ್ ಹೇಳಿದರು.ಚುನಾವಣೆಯಲ್ಲಿ ನಕಲಿ ಮತ ಹಾಕದಂತೆ ಜನತೆಗೆ ಮನವಿ ಮಾಡಿದರು ಹುಚ್ಚ ವೆಂಕಟ್. ಹಣ, ಸೀರೆ, ಹೆಂಡಕ್ಕಾಗಿ ಮತಗಳನ್ನು ಮಾರಿಕೊಳ್ಳಬಾರದು ಎಂದು ಮನವಿ ಮಾಡಿದರು. ಮಂಗಳೂರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ನನಗೆ ತುಂಬಾ ನೋವಾಗಿದೆ. ನಾವೆಲ್ಲರೂ ಪ್ರೀತಿಯಿಂದ ಇರಬೇಕು. ಹಿಂಸಾಚಾರ ಬೇಡ ಎಂದು ಅವರು ಹೇಳಿದರು.